ಅಧುನ್ನವ ಸುಖೀ ಶಾಂತಃ ಬಂಧಮುಕ್ತೋ ಭವಿಷ್ಯಸಿ ॥ 4 ॥
ಯದಿ - ಒಂದು ವೇಳೆ, ದೇಹಮ್ - ದೇಹವನ್ನು, ಪ್ರಧಕ್ಷ - ಬೆರ್ಪಡಿಸಿ, ಚಿತಿ - ಚಿತ್ತದಲ್ಲಿ, ವಿಶ್ರಾಮ್ಯ - ವಿಶ್ರಮಿಸಿ, ತಿಷ್ಠ - ನಿಲ್ಲುವಿಯಾದರೆ, ಅಧುನ್ನವ - ಈ ಕ್ಷಣದಲ್ಲೇ, ಸುಖೀ - ಸುಖಿ, ಶಾಂತಃ - ಶಾಂತನನ್ನು, ಬಂಧಮುಕ್ತಃ - ಬಂಧಮುಕ್ತನನ್ನು, ಭವಿಷ್ಯಸಿ - ಆಗುತ್ತೀಯ.
ಅಹಂಕಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ತಾವು ಶರೀರ, ಮನಸ್ಸು ಹಾಗೂ ಬುದ್ಧಿಯೆಂಬ ಭ್ರಮೆಯಲ್ಲಿ ಜೀವಿಸುತ್ತಿದ್ದಾರೆ.
ಪ್ರತಿಯೊಬ್ಬ ಸಾಧಕನೂ ಸಹ, ತನ್ನ ಆಭಾಸರೂಪ ಅಹಂಕಾರದೊಡನೆ ಬಾಳಬೇಕು. ಅದರ ಅಧಿಪತ್ಯವನ್ನು ಎದುರಿಸಿ ನಿಲ್ಲಬೇಕು. ಅದರ ಅಸ್ತಿತ್ವದ ವಿರುದ್ಧ ಸೆಣಸಾಡಬೇಕು. ತಾನು ಶರೀರ, ಮನಸ್ಸು ಹಾಗೂ ಬುದ್ಧಿಯಲ್ಲ ಎಂಬ ಭಾವನೆಯನ್ನು ನಿಲುವನ್ನು ಹೊಂದಬೇಕು. ತಾನು ಶುದ್ಧ ಚೈತನ್ಯವೆಂಬ ವಾಸ್ತವವನ್ನು ಅನುಭವಿಸಬೇಕು. ವೇದಾಂತದ ಸಾಧನೆಯು ಇದಾಗಿದೆ. ಇದೇ ವೇದಾಂತದ ಸಾಧನೆಯನ್ನು ಮೇಲಿನ ಶ್ಲೋಕದಲ್ಲಿ ಸುಂದರವಾಗಿ ಸಂಕ್ಷೇಪವಾಗಿ ವಿವರಿಸಲಾಗಿದೆ.
