ನ ಪೃಥ್ವೀ ನ ಜಲಂ ನಾಗ್ನಿರ್ನ ವಾಯುರ್ದ್ಯೌರ್ನ ವಾ ಭವಾನ್ ।
ಏಷಾಂ ಸಾಕ್ಷಿಣಮಾತ್ಮಾನಂ ಚಿದ್ರೂಪಂ ವಿದ್ಧಿ ಮುಕ್ತಯೇ ॥ ೧-೩ ॥
ನ ಪೃಥ್ವೀ – ಪೃಥ್ವಿಯಲ್ಲ
ನ ಜಲಮ್ – ಜಲವಲ್ಲ
ನ ಅಗ್ನಿಃ – ಅಗ್ನಿಯಲ್ಲ
ನ ವಾಯುಃ – ವಾಯುವಲ್ಲ
ನ ದ್ಯೌಃ – ಆಕಾಶವಲ್ಲ
ವಾ – ಹಾಗೂ
ಭವಾನ್ – ನೀನು
ಏಷಾಂ – ಇವುಗಳ
ಸಾಕ್ಷಿಣಂ – ಸಾಕ್ಷಿ
ಆತ್ಮಾನಮ್ – ಆತ್ಮನನ್ನು
ಚಿದ್ರೂಪಮ್ – ಚೈತನ್ಯರೂಪವು
ವಿದ್ಧಿ – ತಿಳಿ
ಮುಕ್ತಯೇ – ಮೋಕ್ಷಕ್ಕಾಗಿ.
ಅರ್ಥ:
ನೀನು ಪೃಥ್ವಿಯೂ ಅಲ್ಲ, ಜಲವೂ ಅಲ್ಲ, ಅಗ್ನಿಯೂ ಅಲ್ಲ, ವಾಯುವೂ ಅಲ್ಲ, ಆಕಾಶವೂ ಅಲ್ಲ. ಇವೆಲ್ಲವನ್ನೂ ಗಮನಿಸುವ ಸಾಕ್ಷಿಯಾಗಿರುವ ಚೈತನ್ಯಸ್ವರೂಪ ಆತ್ಮನೆಂದು ತಿಳಿದುಕೋ. ಆತ್ಮಜ್ಞಾನವೇ ಮುಕ್ತಿಗೆ ಮಾರ್ಗವಾಗಿದೆ.
